ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Monday, 26 December 2011

Wednesday, 7 December 2011

Why This Facebook Ri.....!


ವೈ ದಿಸ್ ಕೊಲವೇರಿ ಹಾಡಿನ ಟ್ಯೂನ್ ಗೆ ಕನ್ನಡ ಸಾಹಿತ್ಯ.....


ಫ್ರೆಂಡ್ಸ್ ಇದು ನನ್ನ ಮೊದಲ ಪ್ರಯತ್ನ... ಸಾಹಿತ್ಯ ಮತ್ತು ಹಿನ್ನಲೆಗಾಯನ ನಂದೇ 

(ಮಂಜು.ಎಂ.ದೊಡ್ಡಮನಿ) ನನಗೆ ಹಾಡೋಕೆ ಬರೋದಿಲ್ಲ ಆದ್ರು ಟ್ರೈ 

ಮಾಡಿದಿನಿ  ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.....


~$ಮರೀಚಿಕೆ$~Tuesday, 15 November 2011

Thursday, 20 October 2011

Monday, 26 September 2011

Wednesday, 24 August 2011

ಪುಸ್ತಕಗಳ ಬಿಡುಗಡೆಯ ಸಂತಸದ ಕ್ಷಣಗಳ ಕೆಲವು ಫೋಟೋಗಳು..!


ಬೆಂಗಳೂರು : ದಿನಾಕ 21.08.2011 ರಂದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ದೊಡ್ಡಮನಿ ಎಂ.ಮಂಜುನಾಥ ಅವರ "ಮಂಜು ಕರಗುವ ಮುನ್ನ" ಕವನ ಸಂಕಲನದ ಜೊತೆ ರೂಪ ಎಲ್ ರಾವ್ ಅವರ ಪ್ರೀತಿ ಏನೆನ್ನಲ್ಲಿ ನಿನ್ನ..? ಹಾಗೂ ಸುದೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳನ್ನ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ, ಸಾಹಿತಿ ರಮೇಶ್ ಕಾಮತ್ ಹಾಗೂ ಚಿತ್ರ ಸಾಹಿತಿ ಹೃದಯ ಶಿವ ಅವರುಗಳು ಏಕಕಾಲದಲ್ಲಿ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ತೆಗೆದ ಕೆಲವು ಭಾವ ಚಿತ್ರಗಳು ನಿಮಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೆ ಫೋಟೋ ಕ್ಲಿಕಿಸಿದ ಪ್ರಕಾಶ್ ಸರ್ ಶಿವು ಸರ್ ಬಾಲು ಸರ್ ಮತ್ತು ಗುರುಪ್ರಸಾದ, ಮಲ್ಲಿಕಾರ್ಜುನ್ ಸರ್ ಎಲ್ಲರಿಗೂ ತುಂಬಾ ಥ್ಯಾಕ್ಸ್ ...!


Wednesday, 17 August 2011

3 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ..!


"ಯಾವುದೇ ಯಾರದೇ ಪುಸ್ತಕ ಬಿಡುಗಡೆ ಸಮಾರಂಭಗಳ ಆಹ್ವಾನಕ್ಕೆ ಕಾಯಬೇಡಿ

ನಿಸ್ವಾರ್ಥತೆ ಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಏಕೆಂದರೆ ಅದು ಸಾಹಿತ್ಯಲೋಕಕ್ಕೆ

ನೀವು ನೀಡುವ ಅತಿ ದೊಡ್ಡ ಗೌರವ"

~$ಮರೀಚಿಕೆ$~


ಬ್ಲಾಗ್ ಲೋಕದ ಎಲ್ಲಾ ಸಜ್ಜನರಿಗೂ ಈ ಚಿಕ್ಕವನ ಚಿಕ್ಕ ನಮಸ್ಕಾರಗಳು...!
ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ...! ಹೌದು ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು" ಹಾಗೂ "ಬೆನಕ ಬುಕ್ ಬ್ಯಾಂಕ್"ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು "ಮಂಜು ಕರಗುವ ಮುನ್ನ" ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಹಿತಿಹಾಸದಲ್ಲೇ ವಿನೂತನ (Different) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ ಅವರಿಗೆ ಈ ಮೂಲಕ ಒಂದು ಚಿಕ್ಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ..!
ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ ಅಲ್ಲದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ ಅವರಿಗೂ ಕೂಡ ಅನಂತ ವಂದನೆಗಳು.
ಇನ್ನೂ ನನ್ನ ಎಲ್ಲಾ ಕವನಗಳಲ್ಲೂ ಓದಿ ಪ್ರೋತ್ಸಹಿಸಿ ಕವಿಯಾಗಿಸಿದ ಬಜ್ಜ್. ಆರ್ಕುಟ್ , ಫೇಸ್ ಬುಕ್ ಅಲ್ಲದೆ ಎಸ್.ಎಂ.ಎಸ್. ಗೆಳೆಯ ಗೆಳತಿಯರೆಲ್ಲರಿಗೂ ನಾನು ಚಿರಋಣಿ...!
ಅಂದಹಾಗೆ ನನ್ನ ಕವನ ಸಂಕಲನ "ಮಂಜು ಕರಗುವ ಮುನ್ನ" ಮತ್ತು ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?" ಅಲ್ಲದೆ ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನ ಯಶಸ್ವೀ ಆಗಿ ನಡೆಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ...! ಬರ್ತಿರ ಅಲ್ವ...!

ಈ ಕಾರ್ಯಕ್ರಮಕ್ಕೆ ಸಹಕರಿಸಿ ನಮ್ಮನೆಲ್ಲ ಹುರಿದುಂಬಿಸುತ್ತಿರುವ ಕೆ.ಶಿವು ಸರ್ ಅವರಿಗೂ ಒಂದು ಥ್ಯಾಂಕ್ಸ್ ಹೇಳ್ದೆ ಇರೋಕೆ ಆಗುತ್ತಾ....? ತುಂಬಾ ಧನ್ಯವಾದಗಳು ಶಿವು ಸರ್ ನಿಮ್ಮ ಬ್ಯುಸಿ ಲೈಫ್ ನಲ್ಲೂ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ತುಂಬಾ ಸಹಕರಿಸಿದ್ದಿರ ನಿಮಗೆ ನನ್ನ ಕಡೆಯಿಂದ ಚಿಕ್ಕ ಧನ್ಯವಾದ..!

ದಿನಾಂಕ : 21.08.2011. (ಭಾನುವಾರ ಆಗಸ್ಟ್ 2011)
ಸಮಯ : ಬೆಳಗ್ಗೆ 10:30
ಸ್ಥಳ : ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9742495837
ನಿಮ್ಮ ಆಗಮನದ ನಿರೀಕ್ಷೆಯಲ್ಲಿ
~$ಮರೀಚಿಕೆ$~
ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ"
ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?"
"ಮಂಜು ಕರಗುವ ಮುನ್ನ"

Thursday, 4 August 2011

ಮಂಜು ಕರಗುವ ಮುನ್ನ ಪುಸ್ತಕದ ಬಗ್ಗೆ "ಮಾನಸ" ಪತ್ರಿಕೆಯಲ್ಲಿ

"ಮಾನಸ" ಪತ್ರಿಕೆಯ ಸಂಪಾದಕರಾದ ಕೆ. ಗಣೇಶಕೋಡೂರು ರವರು ಮನತುಂಬಿ ನನ್ನ  "ಮಂಜು ಕರಗುವ ಮುನ್ನ" ಕವನಸಂಕಲನದ ಬಗ್ಗೆ "ಮಾನಸ" ಪತ್ರಿಕೆಯಲ್ಲಿ ಬರೆದಿದ್ದರೆ.... ಒಮ್ಮೆ ನೀವು ಓದಿ......! Tuesday, 2 August 2011

"ಮಂಜು ಕರಗುವ ಮುನ್ನ"

"ಪುಸ್ತಕಗಳ ಇತಿಹಾಸದಲ್ಲೇ (ನನಗೆ ತಿಳಿದ ಮಟ್ಟಿಗೆ) ವಿನೂತನ ಮಾದರಿಯ ಕವನ ಸಂಕಲನದ ಪುಸ್ತಕ ಸದ್ಯದಲ್ಲೇ ನಿಮ್ಮ ಕೈಗಳಲ್ಲಿ " 

ಚಲನಚಿತ್ರ ಸಾಹಿತಿ ಹೃದಯ ಶಿವ ಅವರ ಬೆನ್ನುಡಿ & ಡಾಕ್ಟರ್ ಅಜಾದ್ ಅವರ ಮುನ್ನುಡಿ ಹೊಂದಿರುವ "ಮಂಜು ಕರಗುವ ಮುನ್ನ" ಕವನ ಸಂಕಲನ...!

ಎಂದಿನಂತೆ ಸ್ವಾಗತಿಸಿ ಹರಸಿ ಹಾರೈಸಿ ಆಶೀರ್ವದಿಸಿ ಪ್ರೋತ್ಸಹಿಸಿ ...! 

  ಪ್ರೀತಿಯಿಂದ
~$ಮರೀಚಿಕೆ$~


Wednesday, 27 July 2011

Friday, 10 June 2011

ಅನಿರೀಕ್ಷಿತ..!

ಚಿತ್ತಾರವೇ ಆಗ್ಬೇಕು ತಪ್ಪಾಗಿದೆ ತಿದ್ದಿಕೊಂಡು ಓದಿ 

Wednesday, 27 April 2011

Wednesday, 16 March 2011

Monday, 7 March 2011

ನೀನಿಲ್ಲದೆ ನಾನಿಲ್ಲ ..!

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು

Tuesday, 1 March 2011

ಬೆಣ್ಣೆ ಹುಡುಗ...!

ನನ್ನ ಕವನಕ್ಕೆ ನಾನೇ ಮಾಡೆಲ್ "ಇಷ್ಟ ಆದ್ರೆ ಓದಿ" ಓವರ್ ಅನಿಸಿದರೆ ಸುಮ್ನೆ ಅರ್ಜೆಸ್ಟ್ ಮಾಡಿಕೊಳ್ಳಿ