ಮಂಜು ಕರಗುವ ಮುನ್ನ ಬಂದು ಮಂಜಿನಲ್ಲಿ ಮಿಂದ ನಿಮ್ಮೆಲ್ಲರಿಗೂ ನನ್ನ ವಂದನೆಗಳು ಹೀಗೆ ಬರುತ್ತಿರಿ ! ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ !

Wednesday, 17 August 2011

3 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ..!


"ಯಾವುದೇ ಯಾರದೇ ಪುಸ್ತಕ ಬಿಡುಗಡೆ ಸಮಾರಂಭಗಳ ಆಹ್ವಾನಕ್ಕೆ ಕಾಯಬೇಡಿ

ನಿಸ್ವಾರ್ಥತೆ ಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಏಕೆಂದರೆ ಅದು ಸಾಹಿತ್ಯಲೋಕಕ್ಕೆ

ನೀವು ನೀಡುವ ಅತಿ ದೊಡ್ಡ ಗೌರವ"

~$ಮರೀಚಿಕೆ$~


ಬ್ಲಾಗ್ ಲೋಕದ ಎಲ್ಲಾ ಸಜ್ಜನರಿಗೂ ಈ ಚಿಕ್ಕವನ ಚಿಕ್ಕ ನಮಸ್ಕಾರಗಳು...!
ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ...! ಹೌದು ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು" ಹಾಗೂ "ಬೆನಕ ಬುಕ್ ಬ್ಯಾಂಕ್"ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು "ಮಂಜು ಕರಗುವ ಮುನ್ನ" ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಹಿತಿಹಾಸದಲ್ಲೇ ವಿನೂತನ (Different) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ ಅವರಿಗೆ ಈ ಮೂಲಕ ಒಂದು ಚಿಕ್ಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ..!
ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ ಅಲ್ಲದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ ಅವರಿಗೂ ಕೂಡ ಅನಂತ ವಂದನೆಗಳು.
ಇನ್ನೂ ನನ್ನ ಎಲ್ಲಾ ಕವನಗಳಲ್ಲೂ ಓದಿ ಪ್ರೋತ್ಸಹಿಸಿ ಕವಿಯಾಗಿಸಿದ ಬಜ್ಜ್. ಆರ್ಕುಟ್ , ಫೇಸ್ ಬುಕ್ ಅಲ್ಲದೆ ಎಸ್.ಎಂ.ಎಸ್. ಗೆಳೆಯ ಗೆಳತಿಯರೆಲ್ಲರಿಗೂ ನಾನು ಚಿರಋಣಿ...!
ಅಂದಹಾಗೆ ನನ್ನ ಕವನ ಸಂಕಲನ "ಮಂಜು ಕರಗುವ ಮುನ್ನ" ಮತ್ತು ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?" ಅಲ್ಲದೆ ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನ ಯಶಸ್ವೀ ಆಗಿ ನಡೆಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ...! ಬರ್ತಿರ ಅಲ್ವ...!

ಈ ಕಾರ್ಯಕ್ರಮಕ್ಕೆ ಸಹಕರಿಸಿ ನಮ್ಮನೆಲ್ಲ ಹುರಿದುಂಬಿಸುತ್ತಿರುವ ಕೆ.ಶಿವು ಸರ್ ಅವರಿಗೂ ಒಂದು ಥ್ಯಾಂಕ್ಸ್ ಹೇಳ್ದೆ ಇರೋಕೆ ಆಗುತ್ತಾ....? ತುಂಬಾ ಧನ್ಯವಾದಗಳು ಶಿವು ಸರ್ ನಿಮ್ಮ ಬ್ಯುಸಿ ಲೈಫ್ ನಲ್ಲೂ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ತುಂಬಾ ಸಹಕರಿಸಿದ್ದಿರ ನಿಮಗೆ ನನ್ನ ಕಡೆಯಿಂದ ಚಿಕ್ಕ ಧನ್ಯವಾದ..!

ದಿನಾಂಕ : 21.08.2011. (ಭಾನುವಾರ ಆಗಸ್ಟ್ 2011)
ಸಮಯ : ಬೆಳಗ್ಗೆ 10:30
ಸ್ಥಳ : ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9742495837
ನಿಮ್ಮ ಆಗಮನದ ನಿರೀಕ್ಷೆಯಲ್ಲಿ
~$ಮರೀಚಿಕೆ$~
ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ"
ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?"
"ಮಂಜು ಕರಗುವ ಮುನ್ನ"

2 comments:

  1. ಪ್ರೀತಿಯ ಮಂಜು. ನಿಮಗೆ ಮತ್ತು ನಿಮ್ಮ ಗೆಳೆಯರಿಗೆ ನನ್ನ ಹಾರೈಕೆಗಳಿರುತ್ತವೆ. ಅನಾರೋಗ್ಯ ಮತ್ತು ಪ್ರತಿಕೂಲ ವಾತಾವರಣವಿರುವುದರಿಂದ ನನಗೆ ಬರಲು ಆಗುತ್ತಿಲ್ಲ. ಮರೆಯದೆ ನಿಮ್ಮ ಪುಸ್ತಕವನ್ನು ಕೊಂಡು ಓದುತ್ತೇನೆ. ನನಗೆ ಒಂದು ಕಾಪಿ ಕಳುಹಿಸಿಬಿಡಿ. ಪ್ಲೀಸ್, ಡೊಂಟ್ ಮೈಂಡ್.

    ReplyDelete
  2. tumba dhanyavaadgalu nimage naanu book kalisuttene

    ReplyDelete